ಪ್ರಯತ್ನವಿಲ್ಲದೆ ಫಲವಿಲ್ಲ

  ದಕ್ಷಿಣ ಭಾರತದ  ರಾಜ್ಯಗಳಲ್ಲಿ  ಕರ್ನಾಟಕವು ಒಂದು. ಇಲ್ಲಿ ಮಾತನಾಡುವ  ಸುಮಧುರ ಭಾಷೆ  ಕನ್ನಡ , ಈ ಕನ್ನಡ ಭಾಷಾ ಪ್ರಪಂಚಕ್ಕೆ ಸುಸ್ವಾಗತ. ಹೊಸ ಭಾಷೆಯನ್ನು ಕಲಿಯುವುದು  ಮತ್ತು ಅಲ್ಲಿನ ಸಂಸ್ಕೃತಿಯನ್ನು ಆಳವಾಗಿ ಅರ್ಥಮಾಡಿಕೊಳ್ಳಲು ಕಥೆಗಳು ಬಹಳ ಸಹಕಾರಿಯಿಗುತ್ತದೆ.  ಹೆಚ್ಚು ಜನರು how to learn kannada, kannada classes,  kannada stories , translate to kannada ಎಂದು ಕನ್ನಡ tution ಗಳಿಗಾಗಿ ಹುಡುಕಾಡುತ್ತಾರೆ. ಆದರೆ ಕಥೆಗಳ ಮೂಲಕ ಕನ್ನಡವನ್ನು ಕಲಿಯುವುದು ಬಹಳ ಸುಲಭ.  


  1. ಇಲ್ಲಿನ ಸಂಭಾಷಣೆ,  ಸರಳ ಪದಗಳ ಬಳಕೆ,  ನಿರೂಪಣಾ ಶೈಲಿ ಭಾಷೆಯನ್ನು ಕಲಿಯಲು ತುಂಬಾ ಸಹಕಾರಿಯಾಗುತ್ತದೆ
  2. .  ಕಥೆಗಳು ಭಾಷಾ ಕಲಿಕೆಯನ್ನು ಪ್ರೋತ್ಸಾಹಿಸುವುದು ಮಾತ್ರವಲ್ಲದೆ ಪದಗಳು ಮತ್ತು ಪದಗುಚ್ಛಗಳನ್ನು ಹೆಚ್ಚು ಆಕರ್ಷಕವಾಗಿ ನೆನಪಿಟ್ಟುಕೊಳ್ಳಲು ಸಹಾಯ ಮಾಡುತ್ತದೆ.
  3. ಕನ್ನಡ ಭಾಷೆ ಕಲಿಯುವುದು ಸಣ್ಣಕತೆಗಳಿಂದ ಆರಂಭವಾಗಲಿ. ಇಂದಿನ ಕತೆ

ಪ್ರಯತ್ನವಿಲ್ಲದೆ ಫಲವಿಲ್ಲ


ವಿದ್ಯಾರಣ್ಯಪುರ ಎಂಬ ಊರಲ್ಲಿದ್ದ ಜಗದ್ಗುರುವೊಬ್ಬರು ಏನು ಹೇಳಿದರೂ ಅದು ನಿಜವಾಗುತ್ತದೆ ಎಂಬ ನಂಬಿಕೆ ಆ ಊರಿನ ಜನರಲ್ಲಿತ್ತು


ಮಗುವಿಗೆ ತಂದೆಯ ನೀತಿ ಬೋಧನೆ


ನವಿಲೂರಿನಲ್ಲಿ ಸಾಗರ್‌ ಎಂಬ ಪುಟ್ಟ ಹುಡುಗನಿದ್ದ. ಅವನು ಚಿಕ್ಕವನಿದ್ದಾಗಲೇ ಆತನ ತಾಯಿ ತೀರಿ ಹೋಗಿದ್ದರು. ಸಾಗರ್‌ ತಂದೆ ಹನುಮನಿಗೆ ಮಗನನ್ನು ಸಾಕಲು ಕಷ್ಟವಾದರೂ ಆತನಿಗೆ ಏನೂ ತೊಂದರೆ ಆಗದ ಹಾಗೆ ನೋಡಿಕೊಳ್ಳುತ್ತಿದ್ದರು. ಇರುವ ಒಬ್ಬ ಮಗನನ್ನು ಚೆನ್ನಾಗಿ ಓದಿಸಬೇಕೆಂಬ ಆಸೆಯಿಂದ ಪಟ್ಟಣಕ್ಕೆ ಬಂದು ಒಂದು ಖಾಸಗಿ ಶಾಲೆಗೆ ಸೇರಿಸಿದ್ದರು.





ಒಮ್ಮೆ ಸಾಗರ್‌ನ ತಂದೆಗೆ ಇದ್ದಕ್ಕಿದ್ದ ಹಾಗೆ ಹುಷಾರು ತಪ್ಪಿತು. ಅದಕ್ಕಾಗಿ ಆತ ಅಪ್ಪನನ್ನು ನೋಡಿಕೊಳ್ಳಲು ಶಾಲೆಗೆ ಮೂರು ದಿನ ರಜೆ ಹಾಕಿದ. ಅದೇ ಸಮಯದಲ್ಲಿ ಅವನಿಗೆ ಪರೀಕ್ಷೆಗಳು ಹತ್ತಿರದಲ್ಲಿದ್ದವು. ಅವನಿಗೆ ಯಾರು ಸಹ ಹಿಂದಿನ ತರಗತಿಯಲ್ಲಿ ನಡೆದ ಪಾಠಗಳ ನೋಟ್‌ ಪುಸ್ತಕ ಕೊಡಲಿಲ್ಲ. ಅವನು ಅದರ ಬಗ್ಗೆ ತಲೆ ಕೆಡಿಸಿಕೊಳ್ಳದೆ ಸುಮ್ಮನಿದ್ದ. ಇದರಿಂದಾಗಿ ಅವನಿಗೆ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿತು.



ಸಾಗರ್‌ ಇದಕ್ಕೆ ಬೇಸರ ಮಾಡಿಕೊಳ್ಳದೆ ಅಂಕಪಟ್ಟಿಯನ್ನು ಅಪ್ಪನಿಗೆ ತೋರಿಸಿದನು.

ಅಪ್ಪ ಕೇಳಿದರು , "ಯಾಕಿಷ್ಟು ಕಡಿಮೆ ಅಂಕ ಬಂದಿದೆ. "ನಿನಗೆ ನೂರಕ್ಕೆ ನೂರು ಅಂಕ ತೆಗೆದುಕೊ ಎಂದು ನಾನು ಹೇಳುವುದಿಲ್ಲ. ಆದರೆ ನೀನು ಶ್ರಮ ಹಾಕಿದಷ್ಟು ಅಂಕ ಬರುತ್ತದೆಯಲ್ಲವೇ?' ಎಂದರು. ಅದಕ್ಕೆ ಸಾಗರ್‌ 'ಹೌದಪ್ಪ, ನೀವು ಹೇಳುವುದೇನೋ ಸರಿ. ಆದರೆ ನಿಮಗೆ ಹುಷಾರಿಲ್ಲದ ಸಮಯದಲ್ಲಿ ನಾನು ರಜೆ ಹಾಕಿದ್ದೆನಲ್ಲ. ಅಂದು ನಡೆದ ಪಾಠದ ನೋಟ್ಸ್ ನನಗೆ ಯಾರೂ ನೀಡಲಿಲ್ಲ. ನಾನೇನು ಮಾಡ್ಲಿ?' ಎಂದನು. ಅದಕ್ಕೆ ಅಪ್ಪ 'ಅವರು ಯಾರೂ ಪುಸ್ತಕ ಕೊಡಲಿಲ್ಲ ಎಂದು ಹೀಗೆ ನೀನು ನೆಪ ಹೇಳಿ ಕೂರಬಾರದು. ನಿಮ್ಮ ಟೀಚರ್‌ಗೆ ಹೇಳಿ ಅವರಿಂದ ಹೇಳಿಸಿ ಪಡೆಯಬಹುದಿತ್ತಲ್ಲ ! ನಿನಗೆ ಶಿಕ್ಷಕರಿಗೆ ಕೇಳಲು ಭಯವಾದರೆ ನನ್ನನ್ನು ಕೇಳಬಹುದಿತ್ತು. ನಾನು ಬಂದು ನಿಮ್ಮ ಶಿಕ್ಷಕರಿಗೆ ಹೇಳುತ್ತಿದ್ದೆ' ಎಂದರು.


ಅದಕ್ಕೆ ಸಾಗರ್‌ 'ಹೌದಪ್ಪ, ನನಗಿದು ಹೊಳೆಯಲೇ ಇಲ್ಲ' ಎಂದನು. ಅದಕ್ಕೆ ತಂದೆ 'ಇದು ಕೇವಲ ಓದಿಗೆ ಮಾತ್ರ ಸೀಮಿತವಲ್ಲ ಜೀವನದಲ್ಲೂ ಅಷ್ಟೆ. ಯಾರು ಕೂಡ ನೀನು ಮುಂದುವರೆಯಲು ಸಹಾಯ ಮಾಡುವುದಿಲ್ಲ. ನಾವೇ ಬುದ್ಧಿ ಉಪಯೋಗಿಸಿ ಪರಿಹಾರ ಕಂಡುಕೊಳ್ಳಬೇಕು. ಈ ಮಾತನ್ನು ಯಾವಾಗಲೂ ನೆನಪಿಟ್ಟುಕೋ' ಎಂದರು. ಸಾಗರ್‌ ಅಂದಿನಿಂದ ನೆಪ ಹೇಳಿ ತಪ್ಪಿಸಿಕೊಳ್ಳುವುದನ್ನು ಬಿಟ್ಟು ಜಾಣ ವಿದ್ಯಾರ್ಥಿಯಾದ.

Comments